ತೆಂಗಿನಕಾಯಿ ಹಾಲಿನ ರೈಸ್

15m
Serves 1
instagram.com

Directions

  1. 1ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ ಹಾಕಿಕೊಳ್ಳಿ.
  2. 2ಹೋಲ್ ಸ್ಪೈಸಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  3. 3ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ.
  4. 4ಒಂದು ಸ್ಪೂನ್ ನಷ್ಟು ಜಜ್ಜಿದ ಶುಂಠಿ ಬೆಳ್ಳುಳ್ಳಿ ಹಾಕಿಕೊಳ್ಳಿ.
  5. 5ಸಣ್ಣಗೆ ಹೆಚ್ಚಿಕೊಂಡಿರೋ ಪುದೀನಾ, ಹಸಿ ಬಟಾಣಿ ಮತ್ತು ಟೊಮ್ಯಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
  6. 6ಒಂದು ಕಪ್ ತೆಂಗಿನಕಾಯಿ ಹಾಲು ಮತ್ತು ಒಂದು ಕಪ್ ನೀರು ಹಾಕಿ.
  7. 7ಒಂದು ಕುದಿ ಬಂದಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  8. 8ನೆನೆಸಿಕೊಂಡಿರೋ ಅಕ್ಕಿ ಹಾಕಿ ನೀಟಾಗಿ ಮಿಕ್ಸ್ ಮಾಡಿಕೊಳ್ಳಿ.
  9. 9ಎರಡು ವಿಷಲ್ ಕೂಗಿಸಿ.

Ingredients

  • ಎಣ್ಣೆ
  • ತುಪ್ಪ
  • ಹೋಲ್ ಸ್ಪೈಸಸ್
  • ಹಸಿ ಮೆಣಸಿನಕಾಯಿ
  • ಈರುಳ್ಳಿ
  • 1 ಸ್ಪೂನ್ ಜಜ್ಜಿದ ಶುಂಠಿ ಬೆಳ್ಳುಳ್ಳಿ
  • ಪುದೀನಾ
  • ಹಸಿ ಬಟಾಣಿ
  • ಟೊಮ್ಯಾಟೋ
  • 1 ಕಪ್ ತೆಂಗಿನಕಾಯಿ ಹಾಲು
  • 1 ಕಪ್ ನೀರು
  • ಉಪ್ಪು
  • 1 ಕಪ್ ಅಕ್ಕಿ

Equipment

ಕುಕ್ಕರ್

Tips

  • ತುಂಬಾ ಮಸಾಲೆ ಇಷ್ಟಪಡದೆ ಇರೋರು ಈ ಮೈಲ್ಡ್ ರೈಸ್ ಟ್ರೈ ಮಾಡಿ.
  • ತೆಂಗಿನಕಾಯಿ ಹಾಲಲ್ಲಿ ಮಾಡಿರೋದ್ರಿಂದ ಟೇಸ್ಟ್ ಸೂಪರ್ ಆಗಿರುತ್ತೆ.
  • ಒಂದು ಸಲ ಟ್ರೈ ಮಾಡಿ ಮತ್ತು ಕಾಮೆಂಟ್ ಮಾಡಿ.