ಕರಿ ಲೀವ್ಸ್ ಪನ್ನೀರ್ ಫ್ರೈ

Directions

  1. 1ಪೌಡರ್ ಮಾಡಿಕೊಳ್ಳಲು ಚಕ್ಕೆ, ಲವಂಗ, ಮೆಣಸು, ಧನಿಯಾ, ಜೀರಿಗೆ, ಸೋಂಪು, ಒಣಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಹಾಕಿ ಡ್ರೈ ರೋಸ್ಟ್ ಮಾಡಿ.
  2. 2೧ ಕಪ್ ಕರಿಬೇವನ್ನು ಸೇರಿಸಿ ಡ್ರೈ ರೋಸ್ಟ್ ಮಾಡಿಕೊಳ್ಳಿ.
  3. 3ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸರ್ ಜಾರ್‌ಗೆ ಹಾಕಿ ಪುಡಿ ಮಾಡಿಕೊಂಡು ಒಂದು ಕಡೆ ಎತ್ತಿಟ್ಟುಕೊಳ್ಳಿ.
  4. 4ಕಡಾಯಿಗೆ ಎಣ್ಣೆ ಮತ್ತು ಗೋಡಂಬಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಒಂದು ಕಡೆ ಎತ್ತಿಟ್ಟುಕೊಳ್ಳಿ.
  5. 5ಅದೇ ಕಡಾಯಿಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
  6. 6ಉಪ್ಪು, ಅರಿಶಿನ ಪುಡಿ ಮತ್ತು ಪುಡಿ ಮಾಡಿದ ಮಸಾಲಾ ಹಾಕಿ ಮಿಶ್ರಣ ಮಾಡಿಕೊಳ್ಳಿ.
  7. 7ಪನ್ನೀರ್ ಸೇರಿಸಿ, ಮಸಾಲಾ ಚೆನ್ನಾಗಿ ಕೋಟ್ ಆಗುವವರೆಗೆ ಮಿಶ್ರಣ ಮಾಡಿಕೊಳ್ಳಿ.
  8. 8ಫ್ರೈ ಮಾಡಿದ ಗೋಡಂಬಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

Ingredients

  • 1 stick ಚಕ್ಕೆ
  • 3 ಲವಂಗ
  • 0.25 tsp ಮೆಣಸು
  • 1 tbsp ಧನಿಯಾ
  • 0.5 tsp ಜೀರಿಗೆ
  • 0.5 tsp ಸೋಂಪು
  • 3 ಒಣಮೆಣಸಿನಕಾಯಿ
  • 10 ಬೆಳ್ಳುಳ್ಳಿ ಎಸಳು
  • 0.5 cup ಕರಿಬೇವು
  • 2 tbsp ಎಣ್ಣೆ
  • ಗೋಡಂಬಿ
  • 1 tsp ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ
  • 1 tsp ಸಣ್ಣದಾಗಿ ಹೆಚ್ಚಿದ ಶುಂಠಿ
  • 2 ಹಸಿಮೆಣಸಿನಕಾಯಿ
  • ಕೆಲವು ಕರಿಬೇವು
  • 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
  • ರುಚಿಗೆ ತಕ್ಕಷ್ಟು ಉಪ್ಪು
  • ಅರಿಶಿನ ಪುಡಿ
  • ಪನ್ನೀರ್
  • ಕೊತ್ತಂಬರಿ ಸೊಪ್ಪು
  • ನಿಂಬೆ ರಸ

Equipment

ಬಾಣಲೆಮಿಕ್ಸರ್ ಜಾರ್ಚಮಚಫೋರ್ಕ್